OUR VISION
ಆಹಾರ ರಾಸಾಯನಿಕ ಮುಕ್ತ, ತಿಂಡಿಪೋತ ಕಾರ್ಯಕ್ರಮದಲ್ಲಿ ನಮ್ಮ ದೇಹದ ಇಂಜಿನ್ ಗೆ ಒಳ್ಳೆ ಆಹಾರದ ಬಗ್ಗೆ ತಿಳಿಯೋಣ ಬನ್ನಿ, ಹಾಗೂ ಆಹಾರ ಪ್ರದರ್ಶನ ಸದರಿ ಆಹಾರದ ಮೇಳದಲ್ಲಿ ಎಲ್ಲೂರು ಸ್ವದೇಶಿ ಉತ್ಪನ್ನಗಳನ್ನು ಬಳಸಿ ಬೆಳೆಸೋಣ.
ಆಹಾರ ತಿಂಡಿ ಪ್ರಿಯರಿಗೆ ಫುಲ್ ಹಬ್ಬ ಹಳ್ಳಿ ಸೊಗಡು ನೈಸರ್ಗಿಕ ಕೃಷಿ ಆಹಾರ ಮೇಳದಲ್ಲಿ ಸೊಪ್ಪು, ತರಕಾರಿ, ಹಣ್ಣು, ಕಾಳು, ದೇಶೀ ಆಕಳು ಹಾಲು ಮೊಸರು ಮಜ್ಜಿಗೆ ಬೆಣ್ಣೆ ತುಪ್ಪ, ಖಡಕ್ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಜವಾರಿ ತತ್ತಿಗಳು, ದೇಶೀ ಉಪಹಾರಗಳು, ಸಿರಿ ಧಾನ್ಯ, ಮಿಲೆಟ್ ಪೌಡರ್, ಮಿಲೆಟ್ ಆಹಾರ ಪದಾರ್ಥಗಳು, ಚಟ್ನಿ, ಪಲ್ಯ, ಸಾರು, ಹುಳಿ ಪುಡಿ, ಹುಳಿ ಪದಾರ್ಥಗಳು, ಅಡಿಗೆ ಅನ್ನ, ಎಲ್ಲಾ ತರದ ನುಚ್ಚು, ಮುದ್ದೆ, ದೇಶೀ ಪೇಡಾ, ದೇಶೀ ಚಾಕಲೇಟ್, ಎಲ್ಲಾ ತರದ ಕಾರದ ಪುಡಿ ಸದರಿ ಆಹಾರದ ಮೇಳದಲ್ಲಿ ವಿವಿಧ ರೀತಿಯ ತಿನಿಸುಗಳು, ಬಗೆಬಗೆಯ ಆಹಾರಗಳನ್ನು ಸವಿಯಬಹುದು ರುಚಿ ರುಚಿಯಾದ ಆಹಾರ ಸೇವಿಸಿ ಬಾಯಿ ಚಪ್ಪರಿಸಿ ಆಹಾರ ಉತ್ಪನ್ನಗಳಲ್ಲಿ ಬಳಸಲಾಗಿರುವ ಪದಾರ್ಥಗಳು ಹಾಗೂ ಅವುಗಳಾಲ್ಲಿರುವ ಪೋಷಕಾಂಶಗಳು ಸೇರಿದಂತೆ ಎಲ್ಲಾ ತರದ ಮಾಹಿತಿ ಸಿಗುತ್ತದೆ ಆಯುರ್ವೇದ ಮಾಹಿತಿ ತಿಳಿದವರು ನಮ್ಮಲ್ಲಿ ಕೇಳಿ ಹಂಚಿಕೊಳ್ಳಿ ಎಲ್ಲಾ ತರದ ಮಾಹಿತಿಗಳು ಸಿಗುತ್ತದೆ ನಮ್ಮದೊಂದು ಸಣ್ಣ ಪ್ರಯತ್ನ ನಮ್ಮ ರೈತರನ್ನು ಬೆಳೆಸಲು ಬೆಳೆಯಲು ಇದೊಂದು ಈ ಆಹಾರ ಮೇಳ ಉತ್ತಮ. ನಾನಾ ತರದ ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತು ಹಳ್ಳಿ ಸೊಗಡುನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಹಾರ ಉದ್ಯಮಿಗಳಿಂದ ಸನ್ಮಾನ ಜೊತೆಗೆ ಸಹಾಯಧನ ನೀಡಿ ಗೌರವಿಸಲಾಗುವುದು.